ಅಧ್ಯಾಯ 19

1 ಇದಾದ ಮೇಲೆ ಸ್ವರ್ಗಲ್ ದೊಡ್ಡ ಗುಂಪಲ್ ದೊಡ್ಡ ಸದ್ದು ಆ ಅಂಬ ಒಂದು ಸದ್ದನೆ ಕೇಳಿನಿ ಅವರ್ ಹಲ್ಲೆಲೂಯ , ಜಯವು ಪ್ರಭಾವವು ಶಕ್ತಿ ನಂಗ ದೈವಲ್ ಇದೆ. 2 ಅಂವನ ನ್ಯಾಯತೀರ್ಪು ನಿಜವ್ ನ್ಯಾಯ ಆಗಿದೆದೆ ತನ್ನ ಕೆಟ್ಟದ್ ಯಿಂದ ಲೋಕನೆ ಕೆಡಿಸಿತದೆ ಆ ದೊಡ್ಡ ಕೆಟ್ಟ ಹೆಂಗಸಗ್ ಅಂವ ನ್ಯಾಯತೀರಿಸಿ ಆವಾ ಅಂವನ ಸೇವಕರನೆ ಕೊಂದದ್ ಗಾಗಿ ಅವಾಗ ಶಿಕ್ಷೆನೆ ಮಾಡಿದೆನೆ ಅಂದ್ ಹೇಳಿ ಎರಡನೇ ಸಲ, 3 ಹಲ್ಲೆಲೂಯ ಅಂದು ಕೂಗಿ ಅವ ದಹನದಿಂದಾಗಿ ಹೋಗೆ ಯಾಗಲ್ ಏರಿ ಕೊಂಡು ಹೋತದೆ ಅಂದು ಹೇಳಿದ. 4 ಆಗ ಇಪ್ಪತ್ತು ನಾಕು ಮಂದಿ ಹಳೆವರ್ ಆ ನಾಕ್ ಜೀವಿ ಅಡ್ಡಬಿದ್ದು ಸಿಂಹಾಸನದ ಉದ್ದಲ್ ಕುಳತ್ರಾ ದೈವಗ್ ಕೈ ಮುಗಿದು ಅಮೆನ್ ಹಲ್ಲೆಲೂಯ ಅಂದರು. 5 ಆಗ ಸಿಂಹಾಸನದ ಕಡೆಯಿಂದ ಬಂದ ಒಂದು ಸದ್ದು ದೈವ ದಾಸರೆಲ್ಲಾ , ದೈವಗ್ ಅಂಜವರು ಹಳೆವರ್ ಸಣ್ಣವರು ನಂಗ ದೈವನೆ ಕೊಂಡಾಡನ್ ಅಂದು ಹೇಳಿತು. 6 ತರುವಾಯ ದೊಡ್ಡ ಗುಂಪನ ಸದ್ದು ಲಕ ಜಲಪ್ರವಾಹದ ಘೋಷಲಕ ಜೋರಾಗೆ ಗುಡ್ದನ ಸದ್ದು ಲಕ ಇದ್ದ ಒಂದು ಸದ್ದನೆ ಕೇಳಿತ್ ಅದು ಹಲ್ಲೆಲೂಯ ಸರ್ವಶಕ್ತಿ ಆಗಿರ ನಂಗ ದೈವ ಕರ್ತನ್ ಆಳಿತ್ತೇನೆ. 7 ಬಲಿಯಾದ ಕುರಿ ಆಗಿರ ಮಾದೇ ಆಗ ಕಾಲ ಬಂತು ಅಂವನ ಮಾದೇ ಯಾಗ ಹಣ್ಣ ತಂಗನೆ ಸಿದ್ದಮಾಡಿಕೊಂಡಿದಾಳೆ ಖುಷಿಪಡುಮ ಸಂತೋಷಪಡುಮ, ಅವನೇ ಘನಪಡಿಸಮಾ ಅಂದು ಹೇಳಿತು. 8 ಬೈಲಲ್ ಸದ್ದು ಆದ ನಯವಾದ ನಾರುಮಡಿನೆ ಹಕೊಬಲೆ ಅವಗ್ ಕೊಡದ್ ಆಗಿತ್ತು. ಆ ನಾರುಮಡಿನೆ ಅಂದಲೇ ದೈವ ಜನನ ಸತ್ಕಾರ್ಯವೇ. 9 ಇದನ್ನೆಲ್ಲಾ ಅವಾ ನನ್ನ ಜೊತೆ ಮಾತಾಡಿ ಬಲಿಯಾದ ಕುರಿ ಆಗಿರಾ ಮಾದೇ ಊಟಗ್ ಕರವರ್ ಧನ್ಯರು ಅಂಬದನೆ ಬರಿನ್ ಅಂದು ನನಗ್ ಹೇಳಿ ಈ ಮಾತು ದೈವನೆ ಸತ್ಯಮಾತ್ ಆಗಿದೆ ಅಂದನು. 10 ಆಗ ನಾ ಅಂವನಗ್ ಕೈ ಮುಗಿಯಕ್ಕೆ ಅಂದು ಅವನ ಕಾಲ್ ಮುಂದಕ್ ಬಿಳಲೇ ಅಂವ ಮಾಡಬೇಡ ನೋಡ್ ನಾ ನಿನಗ್ ದೈವನ ಸುದ್ದಿ ಆವಾ ಸಾಕ್ಷಿನೆ ಹೇಳಿರ ನಿನ್ನ ಜೋತೆಗಾರರ್ ಜೊತೇಲ್ ಆಳಾಗಿದೇನೆ ದೈವಗ್ ಕೈಮುಗಿನ್ ಅಂದ್ ಹೇಳಿನ ಯೇಸುನಾ ಸುದ್ದಿಆಗಿರ ಸಾಕ್ಷಿನೆ ಪ್ರವಾದನೆ ಆತ್ಮವೇ. 11 ಸ್ವರ್ಗಲ್ ತೆರೆದಿರುವುದನ್ನೇ ನಾ ಕಂಡು ಆಗ ಇಗೋ ಬಿಳಿಕುದುರೆ ನನಗ್ ಕಾಣಿಸಿತು, ಅದರ ಉದ್ದಲ್ ಕುಳಿತ್ತಿದವನ ನಂಬಿಕೆ ಇರಂಗ ಸತ್ಯಇರಂಗ ಅಂದು ಯೆಸರ್ ಅಂವ ನೀತಿಯಿಂದ ನ್ಯಾಯತಿರಿಸುತ್ತೇನೆ, ನೀತಿ ಯಿಂದ ಯುದ್ದ ಮಾಡುತ್ತೇನೆ. 12 ಅಂವನ ಕಣ್ಣು ಬೆಂಕಿ ತರ ಇರತದೆ, ಅವನ ತಲೆ ಉದ್ದಲ್ ಜಾಸ್ತಿ ಮುಕುಟ ಇತ್ತು, ಅವನಾಗ ಒಂದು ಹೆಸರು ಬರೆದು ಕೊಟ್ಟಿದೆ, ಅದು ಅವನಂಗ ಹೊರತ್ ಇನ್ಯಾರಿಗು ತಿಳಿದಿಲ್ಲ. 13 ಅಂವ ರಕ್ತ ಪ್ರೋಕ್ಷಿತವಾದ ಬಟ್ಟನೆ ಹಾಕಿಕೊಂಡಿದ್ದ , ಅವನಿಗೆ ದೈವನ ವಾಕ್ಯ ಅಂದು ಹೆಸರು. 14 ಸ್ವರ್ಗಲಿರ ಸೈನ್ಯದವರ್ ಸದ್ದ ಆಗಿ ಇರ ನಯವಾದ ನಾರು ಮಡಿನೆ ಹಾಕಿಕೊಂಡು ಬಿಳಿ ಕುದುರೆ ಉದ್ದಲ್ ಹತ್ತಿರಾವರಾಗಿ ಅಂವನ ಹಿಂದಕ್ ಬಂದೊಡ್ಡಿದರು. 15 ಜನನೆ ಹೊಡಿಯಕ್ಕೆ ಹದವಾದ ಕತ್ತಿನೆ ಅಂವನ ಬಾಯಿಂದ ಬರುತದೆ, ಅಂವ ಅವರನೇ ಕಬ್ಬಿಣದ ಕಡ್ಡಿಯಿಂದ ಆಳಿತ್ತೇನೆ ಅಂವ ಸರ್ವಶಕ್ತನಾದ ದೈವನ ಉಗ್ರಕೋಪ ಅಂಬ ದ್ರಾಕ್ಷಿಯ ತೋಟಲ್ ಇರಾದನೆಲ್ಲಾ ಮೆಟ್ಟಿತೆನೆ, ಅಂವನ ತೊಡೆ 16 ಉದ್ದಲ್ ಬಟ್ಟಲ್ ರಾಜಾದಿರಾಜನ ಕರ್ತರ ಕರ್ತನ ಅಂಬ ಹೆಸರ್ ಬರೆದಿದೆ. 17 ಆಗ ಒಬ್ಬ ದೈವ ದೂತನ್ ಸೂರ್ಯನಲ್ ನಿಂದಿರುವುದನೆ ಕಂಡೆ, ಅಂವ ದೊಡ್ಡ ಸದ್ದುಯಿಂದ ಕೂಗಿ ಮೋಡದ ಹಾರಡ ಇಲ್ಲಾ ಹಕ್ಕಿಗೂ ಬಾನ್ ದ್ಯಾವ ಮಾಡಸ್ ದೊಡ್ಡ ಊಟಕ್ ಕೂಡಿಬನ್ನಿ, 18 ರಾಜರ ಬಾಡನೆ , ಸಹಸ್ರಾಧಿಪತಿ ಬಾಡನೆ ಪರಾಕ್ರಮ ಶಾಲಿಗ್ ಬಾಡನೆ, ಕುದುರೆಯ ಬಾಡನೆ ರಾಹುತರ ಬಾಡನೆ, ಸ್ವತಂತ್ರರ ಆಳಾಗಿರ ದೊಡ್ಡವರ, ಸಣ್ಣವರ ಇಲ್ಲರ ಬಾಡನೆ ತಿನ್ನಲೇ ಬನ್ನಿ ಅಂದು ಹೇಳಿನ. 19 ತರುವಾಯ ಆ ಮೊದಲ ಪ್ರಾಣಿ ಭೂಮಿಲಿರ ರಾಜಮರ್ ಅವರ ಗಗುಂಪುನವರನು ಆ ಕುದುರೆ ಉದ್ದಲ್ ಕುಳಿತವರ ಮೇಲೆ , ಅಂವನ ಗುಂಪಿನ ಉದ್ದಲ್ ಉದ್ದ ಮಾಡಲೆ. 20 ಕೂಡಿ ಬಂದದನೆ ನೋಡಿನಿ ಆಗ ಪ್ರಾಣಿ ಸಿಕ್ಕಿತ್ ಇದಲ್ಲದೆ ಪ್ರಾಣಿನ ಮುಂದಕ್ ದೊಡ್ಡ ಕಾರ್ಯನೆಲ್ಲ ಮಾಡಿ ಪ್ರಾಣಿನ ಗುರುತು ಹಾಕಿಸಿಕೊಂಡವರನೆ ಅದರ ವಿಗ್ರಹಗ ಕೈ ಮುಗಿದ್ ವರನೇ ಮಂಕುಮಾಡಿ ಆ ಸುಳ್ಳು ಪ್ರವಾದಿ ಅದರ ಜೊತೇಲ್ ಸಿಕ್ಕಿನ ಇವರಿಬ್ಬರ ಜೀವ ಇರಗ ಗಂದಕಯಿಂದ ಉರಿವ ಬೆಂಕಿ ಕೆರಲ್ ಹಾಕಲಯಿತು. 21 ಉಳಿದವರು ಆ ಕುದುರೆ ಉದ್ದಲ್ ಕುಳಿತ್ತಿದವನ ಬಾಯಿಂದ ಬಂದ ಕತ್ತಿಯಿಂದ ಸತ್ತವಾದರ್ ಹಿಂದೆ ಹಕ್ಕಿಯಲ್ಲ ಅವರ ಬಾಡನೆ ವಟ್ಟೆ ತುಂಬಾ ತಿಂದರ್.